Description
ಒಂದು ಪುಟ್ಟ ಮುನ್ನುಡಿ: ಸಂವಿಧಾನದ ಆಶೋತ್ತರಗಳು ಕುಸಿಯುತ್ತಿರುವ ಕಾಲಘಟ್ಟವಿದು; ಇಂತಹ ಸಂದರ್ಭದಲ್ಲಿ ಜನ ಸಮುದಾಯಕ್ಕೆ ಸಂವಿಧಾನದದ ಆತ್ಮವೆಂದು ಪ್ರಾಜ್ಞರು ಪರಿಗಣಿಸಿದ ಪೀಠಿಕೆಯ ಬಗ್ಗೆ ತಿಳಿಸಿಕೊಡಲು ಮಾಡಿದ ಪ್ರಯತ್ನವೇ ಸಂವಿಧಾನ ಪೀಠಿಕೆ ಒಂದು ಪುಟ್ಟ ಮುನ್ನುಡಿ, ಪುಸ್ತಕವು ಸಂವಿಧಾನದ ಪೀಠಿಕೆಯ ಚಿರಂತನ ಆಶಯಗಳಾದ ಸಾರ್ವಭೌಮತೆ, ಸಮಾಜವಾದಿತ್ವ, ಸಮಾನತೆ,ಸ್ವಾತಂತ್ರ್ಯ, ಘನತೆ,ಸಮತೆ, ನ್ಯಾಯ, ಜಾತ್ಯಾತೀತತೆಗಳ ಪ್ರಸ್ತುತತೆಯನ್ನು ಕಾನೂನಿನ ಮೂಲಕ ಜನ ಸಾಮಾನ್ಯರು ಗೆದ್ದುಕೊಂಡ ಉದಾಹರಣೆಯೊಂದಿಗೆ ಜನ ಸಮುದಾಯದಲ್ಲಿ ಈ ವಿಷಯಗಳನ್ನು ಪರಿಣಾಮಕಾರಿಯಾಗಿ ಮುಂದುವರೆಸಿಕೊಂಡು ಹೋಗುವ ಜಾಗೃತಿಯನ್ನು ಮೂಡಿಸುತ್ತದೆ.