ಜನ ಪ್ರಕಾಶನ
ಜನ ಪ್ರಕಾಶನ ಸಾಹಿತ್ಯ ಕ್ಷೇತ್ರದಲ್ಲಿ ವಿನೂತನ ಪ್ರಯತ್ನ ಮಾಡುವ ಆಶಯದೊಂದಿಗೆ ಸಮಾನ ಮನಸ್ಕ ಸ್ನೇಹಿತರು ಒಂದು ತಂಡವಾಗಿ ಪ್ರಾರಂಭಿಸಿದ ಪ್ರಕಾಶನವೇ ಜನ ಪ್ರಕಾಶನ. ಮುಖ್ಯವಾಗಿ ಪ್ರಗತಿಪರ ವಿಚಾರಧಾರೆಯ ಪುಸ್ತಕಗಳು ಎಲ್ಲ ವರ್ಗದ ಜನರಿಗೂ ಕೈಗೆಟಕುವ ಬೆಲೆಯಲ್ಲಿ ಸಿಗುವಂತೆ ಪುಸ್ತಕಗಳನ್ನು ಒದಗಿಸಬೇಕು ಎಂಬುದು ಜನ ಪ್ರಕಾಶನದ ಪ್ರಮುಖ ಉದ್ದೇಶವಾಗಿದೆ. ಜನ ಸಮುದಾಯದ ಸಂಸ್ಕೃತಿ, ಬದುಕು-ಬವಣೆ ಹಾಗೂ ವೈಚಾರಿಕತೆಯ ವಿಸ್ತೃತಿ ಮತ್ತು ವೈಜ್ಞಾನಿಕ ಮನೋಭಾವದ ಜೊತೆಗೆ ಸಾಮಾಜಿಕ ನ್ಯಾಯದ ಸಮಗ್ರ ತಿಳುವಳಿಕೆಯನ್ನು ಜನ ಸಾಮಾನ್ಯರಿಗೆ ಅಕ್ಷರದ ಮೂಲಕ ಬಿತ್ತರಿಸಬೇಕು ಎನ್ನುವ ಧ್ಯೇಯೋದ್ದೇಶದ ಪ್ರತಿಫಲವಾಗಿ ಹಲವಾರು ಪುಸ್ತಕಗಳು ಜನ ಪ್ರಕಾಶನದ ಮೂಲಕ ಮೂಡಿ ಬರುತ್ತಿವೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳು -ಯುವಜನರು, ಮಹಿಳೆಯರು, ರೈತ-ಕಾರ್ಮಿಕರು ಹಾಗೂ ಸಮಸ್ತ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಂತಹ ನಿಟ್ಟಿನಲ್ಲಿ, ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯಿಂದ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಸಂಶೋಧಿತ, ಸಂಪಾದಿತ ಮತ್ತು ಸಾಹಿತ್ಯಕ ಕೃತಿಗಳನ್ನು ಜನ ಪ್ರಕಾಶನ ಪ್ರಕಟಿಸುತ್ತಿದೆ. ನಮ್ಮ ಹೆಸರೇ ಸೂಚಿಸುವಂತೆ ಜನ ಸಮುದಾಯವನ್ನು ಜಾಗೃತಗೊಳಿಸುವ ಜನ ಪರ ಪಂಥದ ಪ್ರಕಾಶನವು ನಮ್ಮದಾಗಿದೆ.
ಮಾನವ ಹಕ್ಕುಗಳು
ಮಾನವ ಹಕ್ಕುಗಳು:- ಮಾನವನ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ ‘ಮಾನವ ಹಕ್ಕುಗಳ ಮಂಡನೆ’. ಬಹುಷಃ ಅದು ನಡೆಯದೇ ಇದ್ದರೆ ಪ್ರಪಂಚದಲ್ಲಿ ಇನ್ನೆಷ್ಟು ಅರಾಜಕತೆ ಬೆಳೆದು ಬಿಡುತ್ತಿತ್ತೋ ಏನೋ! ಅಂತಹ ಮಾನವ ಹಕ್ಕುಗಳ ಉಗಮ, ಬೆಳವಣಿಗೆ, ವರ್ತಮಾನದಲ್ಲಿ ಮಾನವ ಹಕ್ಕುಗಳ ಸ್ಥಿತಿಗಳ ಬಗ್ಗೆ ಹಾಗೂ ಮಾನವ ಹಕ್ಕುಗಳಿಗೆ ಸಾಂವಿಧಾನಿಕ ಪ್ರಾತಿನಿಧ್ಯ ಮತ್ತು ಜಾನಪದೀಯವಾಗಿ ಮಾನವ ಹಕ್ಕುಗಳಿಗೆ ಆದಂತಹ ಸಂಘರ್ಷಗಳ ಚಿತ್ರಣವನ್ನೇ ಈ ಪುಸ್ತಕ ಹೊಂದಿದೆ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾಧ ಎಚ್. ಎನ್. ನಾಗಮೋಹನ್ ದಾಸ್ ಅವರು ಬರೆದ ಪುಸ್ತಕ ಇದಾಗಿದೆ.
ವೈಚಾರಿಕ ಮತ್ತು ಪ್ರಗತಿಪರ ಚಿಂತನೆಗಳು ಎಲ್ಲರ ಮನದಲ್ಲಿ ಹಾಸುಹೊಕ್ಕಾಗಬೇಕೆಂಬುದೇ ಈ ಪ್ರಕಾಶನದ ಉದ್ದೇಶ
WHAT OTHERS SAY
ಜನ ಪ್ರಕಾಶನವು ಚಿಂತನ ಶೀಲ ಪ್ರಕಟಣೆಗಳ ಮೂಲಕ ಜನಪರ ಆಶಯಗಳನ್ನು ನೆಲೆಗೊಳಿಸುವ ಬರಹ, ಬದ್ಧತೆಯಿಂದ ಆರಂಭಗೊಂಡು ಉತ್ತಮ ಕೆಲಸ ಮಾಡುತ್ತಿದೆ. ಸೃಜನ ಶೀಲತೆ ಮತ್ತು ಚಿಂತನಶೀಲತೆಗಳನ್ನು ಪುಸ್ತಕ ಪ್ರಕಟಣೆಯ ಮೂಲಕ ಪ್ರೋತ್ಸಾಹಿಸುತ್ತಾ ಬಂದಿದೆ. ಬಹುಮುಖ್ಯವಾಗಿ ಸಮಕಾಲೀನ ಸಂದರ್ಭದ ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳನ್ನು ಪರಿಶೀಲಿಸುವ ಪುಸ್ತಕಗಳ ಮೂಲಕ ಪ್ರಜಾಸತ್ತಾತ್ಮಕ ಚಚರ್ೆ ಮತ್ತು ಚಿಂತನೆಗಳಿಗೆ ಪ್ರೇರಕವಾಗುತ್ತಿದೆ. ಈಗ ಜನ ಪ್ರಕಾಶನವು ವೆಬ್ ಸೈಟ್ ಅನ್ನು ಪ್ರಾರಂಭಿಸುತ್ತಿದ್ದು ಸಂತೋಷದ ಸಂಗತಿ; ಆನ್ ಲೈನ್ನಲ್ಲಿ ಪುಸ್ತಕಗಳನ್ನು ಒದಗಿಸುವ ಉದ್ದೇಶವನ್ನು ಸಾಕಾರಗೊಳಿಸಲಿದೆ. ಜನ ಪ್ರಕಾಶನವು ತನ್ನ ಹಾದಿಯಲ್ಲಿ ಅಚ್ಚಳಿಯದ ಬೆಳಕಿನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ಮುಂದುವರೆಯಲಿ ಎಂದು ಹಾರೈಸುತ್ತೇನೆ.
ಬರಗೂರು ರಾಮಚಂದ್ರಪ್ಪ
ಸಮಾನತೆ + ಸಾಮಾಜಿಕ ನ್ಯಾಯ = ಅಭಿವೃದ್ಧಿ
ಜನ ಪ್ರಕಾಶನವು ಪ್ರಕಟಿಸಿರುವ ನನ್ನ 'ಅಭಿವೃದ್ಧಿಯ ಸಾಮಾಜಿಕ ಆಯಾಮಗಳು' ಕೃತಿಗೆ ನಾಡಿನ ಮಹತ್ವದ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ನವರು ಮುನ್ನುಡಿ ಬರೆದಿದ್ದಾರೆ. ಈ ಕೃತಿಯಲ್ಲಿ ನಾನು 'ಎಲ್ಲಿಯವರೆಗೆ ಸಮಾಜದಲ್ಲಿನ ವಂಚಿತ ವರ್ಗ-ಅಂಚಿನಲ್ಲಿರುವ ವರ್ಗಗಳು ಹೆಚ್ಚಿನ ಅಭಿವೃದ್ಧಿ ಒಳಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅಭಿವೃದ್ಧಿ ಪೂರ್ಣ ಎನಿಸಿಕೊಳ್ಳಲಾರದು' ಎಂಬ ಸತ್ಯವನ್ನು ಪ್ರತಿಪಾದಿಸಲು ಪ್ರಯತ್ನಿಸಿದ್ದೇನೆ. ಸಮಾನತೆಯ ಸಾಧನೆಯು ಸಮೃದ್ಧತೆಯ ಮೂಲ ದ್ರವ್ಯವಾಗಿದೆ. ನನ್ನ ಬಲವಾದ ನಂಬಿಕೆಯೆಂದರೆ 'ಸಮಾನತೆ + ಸಾಮಾಜಿಕ ನ್ಯಾಯ = ಅಭಿವೃದ್ಧಿ. ಸಾಮಾಜಿಕ ನ್ಯಾಯರಹಿತ ಸಮಾನತೆಯು ಸಮಾನತೆಯಲ್ಲ. ಸಮಾನತೆ ರಹಿತ ಅಭಿವೃದ್ಧಿ ಅಭಿವೃದ್ಧಿಯಲ್ಲ. ಶ್ರಮಿಕ ವರ್ಗದ ಪರಿಶ್ರಮವು ಅಭಿವೃದ್ಧಿಯ ಮೂಲದ್ರವ್ಯವಾಗಿದೆ.
ಟಿ. ಆರ್. ಚಂದ್ರಶೇಖರ್
ಜನ ಪ್ರಕಾಶನ ಸದಭಿರುಚಿಯ ಪ್ರಗತಿಪರ ವಿಚಾರಧಾರೆಯ ಪುಸ್ತಕಗಳ ಪ್ರಕಟಣೆಗೆ ಹೆಸರುವಾಸಿಯಾದ ಪ್ರಕಾಶನ, ಈ ಸಂಸ್ಥೆ ಈಗ ತನ್ನದೇ ಆದ ಜಾಲತಾಣವನ್ನು ಆರಂಭಿಸುತ್ತಿರುವುದು ಆನ್ ಲೈನ್ ಮಾರಾಟವನ್ನು ಆರಂಭಿಸುತ್ತಿರುವುದು ತುಂಬ ಸಂತೋಷದ ಸಂಗತಿಯಾಗಿದೆ. ಪ್ರಗತಿಪರ ವಿಚಾರಧಾರೆಯ ಪುಸ್ತಕಗಳನ್ನ ಓದಬೇಕೆನ್ನುವವರಿಗಾಗಿ ವೆಬ್ ಸೈಟ್ ಆರಂಭಿಸುತ್ತಿರುವುದು ಒಂದು ಯಶಸ್ವಿ ಹೆಜ್ಜೆ. ಯಾವುದೇ ಒಂದು ಸಂಸ್ಥೆ ಜನಪರವಾಗಿ ಕಾರ್ಯನಿರ್ವಹಿಸುವಾಗ ತಂತ್ರಜ್ಞಾನಕ್ಕೆ ತೆರೆದುಕೊಂಡು ಜನರಿಗೆ ಹತ್ತಿರವಾಗುವುದು ಬಹಳ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಜನ ಪ್ರಕಾಶನಕ್ಕೆ ಶುಭಾಶಯ ಕೋರುತ್ತೇನೆ. ನಾವೆಲ್ಲ ಈ ವೆಬ್ ಸೈಟ್ ನ ಸದ್ಬಳಿಕೆ ಮಾಡಿಕೊಂಡು ನಮ್ಮ ಚಿಂತನೆಗಳನ್ನು ಪ್ರಖರಗೊಳಿಸಿಕೊಳ್ಳೋಣ. ಜನರ ಜೀವನದ ಜೀವನಾಡಿಯಾಗಿ ಕೆಲಸ ಮಾಡಲು ನಾವು ಕೂಡ ಜನ ಪ್ರಕಾಶನದ ಜೊತೆ ಕೈ ಜೋಡಿಸೋಣ ಎಂದು ಆಶಿಸುತ್ತೇನೆ.
ಡಾ|| ವಸುಂಧರಾ ಭೂಪತಿ
ಜನ ಪ್ರಕಾಶನವು ಒಂದು ಸಮಾಜಮುಖಿ, ಜನಸ್ನೇಹಿ ಪ್ರಕಾಶನ.
ವಿಚಾರಚಾದ, ಜ್ಞಾನ, ತಿಳುವಳಿಕೆಯನ್ನು ಹೆಚ್ಚಿಸುವುದೇ ಉದ್ದೇಶ
ಎಲ್ಲ ವರ್ಗ, ಎಲ್ಲ ವಯಸ್ಸಿನವರಿಗೆ ಜ್ಞಾನ, ವಿಜ್ಞಾನದ ಬೆಳಕನ್ನು ನೀಡುತ್ತದೆ.
ನನ್ನ ಎರಡು ಪುಸ್ತಕಗಳು 'ನೆಮ್ಮದಿಯ ಕುಟುಂಬ', 'ಮಕ್ಕಳ ಭವಿಷ್ಯ' ಈ ಪ್ರಕಾಶನದಿಂದ ಪ್ರಕಟಣೆಗೊಂಡಿವೆ.
ಉತ್ತಮ ವಿನ್ಯಾಸ, ಮುದ್ರಣ, ಕೈಗೆಟಕುವ ಬೆಲೆಯ ಪುಸ್ತಕಗಳನ್ನು ಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ.
ಓದುಗರು ಇಂತಹ ವೈಚಾರಿಕ ಪುಸ್ತಕಗಳನ್ನು ಕೊಂಡು ಓದಬೇಕು, ಪುಸ್ತಕಗಳೇ ಉಡುಗೊರೆ!
ಡಾ. ಸಿ. ಆರ್. ಚಂದ್ರಶೇಖರ್
Our Latest News
ಮಾನಸೋಲ್ಲಾಸ
ಕಲಿಕೆ ಮತ್ತು ನೆನಪು: ಮಕ್ಕಳ ಉತ್ತಮ ಕಲಿಕೆ ಮತ್ತು ನೆನಪಿಗೆ ಎಂಟು ಸೂತ್ರಗಳು: ಅಧ್ಯಯನ ಮಾಡಲು ನಿರ್ದಿಷ್ಟ ಸಮಯ ಮತ್ತು ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಆ ಸಮಯ […]
ನಾವು ಎರಡನೇ ದರ್ಜೆಯ ಪ್ರಜೆಗಳು
ಇತ್ತೀಚಿಗೆ ಜನಪ್ರಕಾಶನದ ‘ಸಂವಿಧಾನ ಪೀಠಿಕೆ: ಒಂದು ಪುಟ್ಟ ಮುನ್ನುಡಿ’ ಪುಸ್ತಕದ ಬಿಡುಗಡೆ ಕೋರಮಂಗಲದ ಅಂಬೇಡ್ಕರ್ ಭವನದಲ್ಲಿ ನೆರವೇರಿತು. ‘ಸ್ಲಂ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಆ ಜಾಗದ ಜನರೆಲ್ಲ […]