Description
ಮಹಿಳೆ ಭ್ರಮೆ ಮತ್ತು ವಾಸ್ತವ:- ನಮ್ಮ ಸಮಾಜದ ಅರ್ಧದಷ್ಟು ವ್ಯಾಪ್ತಿ ಹೊಂದಿರುವ ಮಹಿಳೆಯರು ಪ್ರಪಂಚಾದ್ಯಂತ ಅನೇಕ ತಲ್ಲಣಗಳನ್ನು ಅನುಭವಿಸುತ್ತಿದ್ದಾರೆ. ‘ಅಬಲೆ’ ಎಂಬ ಹಣೆಪಟ್ಟಿ ಕಟ್ಟಿ, ಜಡ ಮೂಲಭೂತವಾದಗಳಿಂದ ಅವಳ ಕ್ರಿಯಾಶೀಲ ಕೈ-ಕಾಲುಗಳನ್ನು ಬಂಧಿಸಿ, ಸಂಪ್ರದಾಯದ ಪೆಟ್ಟಿಗೆಯಲ್ಲಿ ಅವಳ ಹೆಡೆಮುರಿ ಕಟ್ಟಿ ಯಾವ ರೀತಿ ಪುರುಷ ಪ್ರಧಾನ ಸಮಾಜ ಹಿಂಸಿಸುತ್ತಿದೆ? ಹಾಗೂ ಯಾವ ರೀತಿ ಡಾಂಭಿಕವಾಗಿ ಎಲ್ಲ ಮತಧರ್ಮಗಳೂ ಅವಳನ್ನು ವಿಜೃಂಭಿಸುತ್ತವೆ ಎಂಬುದರ ಬಗ್ಗೆ ಹಲವು ವಿಚಾರವಾದಿಗಳು ಬರೆದಿರುವ ಲೇಖನಗಳ ಸಂಗ್ರಹವೇ ಮಹಿಳೆ ಭ್ರಮೆ ಮತ್ತು ವಾಸ್ತವ ಈ ಕೃತಿ ಮುನ್ನಡೆಯಲ್ಲಿ ಲಭ್ಯವಿದೆ.