Description
ಶಾಂತವೇರಿ ಗೋಪಾಲಗೌಡರು ಜನಪರ ನಿಲುವುಳ್ಳ ರಾಜಕಾರಣಿಗಳಲ್ಲಿ ಒಬ್ಬರಾಗಿದರು. ಸ್ವಾತಂತ್ರ್ಯ ಚಳುವಳಿಯ ಆಶಯವನ್ನು ಮೈಗೂಡಿಸಿ ಕೊಂಡಿದ್ದವರು. ಸಮಾಜವಾದಿ ರಾಮ ಮನೋಹರ ಲೋಹಿಯಾ ಅವರ ಅನುಯಾಯಿಯಾಗಿದ್ದ ಶಾಂತವೇರಿ ಗೋಪಾಲಗೌಡರು ‘ಉಳುವವನೇ ಹೊಲ ದೊಡೆಯ’ ಎಂಬ ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದವರು. ಇಂತಹ ಧೀಮಂತ ರಾಜಕಾರಣಿಯವರ ಬಗ್ಗೆ ಈಗಿನ ತಲೆಮಾರಿಗೆ ತಿಳಿಯಲಿ ಎಂಬ ಮಹದಾಶಯವನ್ನು ಇಟ್ಟುಕೊಂಡು, ಆತ್ಮೀಯಾರಾದ ಕಿಗ್ಗ ರಾಜಶೇಖರ್‌ರವರು ಈ ಮಹತ್ವದ ಕೃತಿಯನ್ನು ಸಂಪಾದಿಸಿದ್ದಾರೆ.