ಗ್ರಾಮದ ಕನಸು

220.00

ಗೋಪಿನಾಥ್ ಕರವಿ

Category:

Description

ಹಳ್ಳಿಗಳು ಹಿಂದಿನಿಂದಲೂ ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ದೇಶದ ಅತಿದೊಡ್ಡ ಜನಸಂಖ್ಯೆ ಹಳ್ಳಿಗಳಲ್ಲಿ ವಾಸ ಮಾಡುತ್ತಿದೆ. ಹಳ್ಳಿಗಳಿಗೆ ಇದ್ದ ಪೂರ್ವ ಸೌಂದರ್ಯ ಬರಬರುತ್ತಾ ಕುಗ್ಗುತ್ತಿದೆಯೆ ಅನ್ನಿಸುತ್ತಿದೆ. ಮಹಾತ್ಮ ಗಾಂಧೀಜಿಯವರ ಗ್ರಾಮಗಳ ಸರ್ವೋದಯ ಮತ್ತು ಗ್ರಾಮ ಸ್ವರಾಜ್ ಕನಸು ಸ್ವಾತಂತ್ರ‍್ಯ ಬಂದು ಏಳು ದಶಕಗಳು ಕಳೆದರೂ ನನಸಾಗಿಲ್ಲ. ಕಥೆ, ಕಾದಂಬರಿಗಳಲ್ಲಿ ಸುಂದರವಾದ ಹಳ್ಳಿಗಳನ್ನು ಹುಡುಕಬೇಕು. ಆ ರಮ್ಯತೆ ಬರುಬರುತ್ತಾ ಬಡತನ, ಹಸಿವು, ಜಾತೀಯತೆ, ಸೋಮಾರಿತನ, ಮೌಢ್ಯ, ನೀತಿಗೆಟ್ಟ ರಾಜಕಾರಣ, ಪಕ್ಷ-ಗುಂಪುಗಳ ರಾಜಕೀಯ ಇವುಗಳಿಂದ ಹಳ್ಳಿಗಳು ಬಳಲುತ್ತಿವೆ. ಬಾಲ್ಯವನ್ನು ಹಳ್ಳಿಗಳಲ್ಲೆ ಕಳೆದು ನಗರಗಳಲ್ಲಿ ಬದುಕು ಕಟ್ಟಿಕೊಳ್ಳಲು ಹಳ್ಳಿಗಳನ್ನು ಬಿಟ್ಟು ಬಂದು ನಗರಗಳಲ್ಲಿ ಅನಾಥ ಭಾವನೆ ಅನುಭವಿಸುತ್ತಿರುವವರೂ ಸಹ ನಗರಗಳಲ್ಲಿನ ಸೌಲಭ್ಯಗಳಿಗೆ ಮಾರುಹೋಗಿದ್ದಾರೆ.

ಗ್ರಾಮೀಣಾಭಿವೃದ್ಧಿಯ ಕಾಳಜಿ ಉಪದೇಶ, ಉದ್ದುದ್ದ ಭಾಷಣಗಳಿಗೆ ಮಾತ್ರ ಸೀಮಿತವಾಗಬಾರದು. ನಮಗೆ ಅನ್ನ ಕೊಡುತ್ತಿರುವ ಹಳ್ಳಿಗಳನ್ನು ಸುಧಾರಿಸಲು ಮಾರ್ಗಗಳನ್ನು ಹುಡುಕಿ, ಹಳ್ಳಿ ಜನರ ಋಣ ತೀರಿಸಲು ಪ್ರಯತ್ನ ಮಾಡಬೇಕಿದೆ. ಹಳ್ಳಿಯಿಂದ ಬಂದು ನಗರಗಳಲ್ಲಿ ವಾಸಿಸುತ್ತಿದ್ದರೂ ನಮ್ಮ ಕಲಿಕೆ ಮತ್ತು ಗಳಿಕೆಯ ಸ್ವಲ್ಪ ಭಾಗವನ್ನಾದರೂ ಹಳ್ಳಿಗಳಿಗೆ ಅರ್ಪಿಸಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿರುವ ಹೊಣೆ ನಮ್ಮೆಲ್ಲರದ್ದಾಗಬೇಕಿದೆ.