‘ಒಕ್ಕೂಟ ಬಜೆಟ್ ‘ ವಿಸ್ತೃತ ಚರ್ಚೆ ಮತ್ತು ವಿಮರ್ಶೆ

100.00

ಟಿ ಆರ್ ಚಂದ್ರಶೇಖರ

Category:

Description

ಈ ಹೊತ್ತಿಗೆಯಲ್ಲಿ ಭಾರತ ಒಕ್ಕೂಟ ಸರ್ಕಾರದ 2024-25ನೆಯ ಸಾಲಿನ ಬಜೆಟ್‌ನ ವಿವಿಧ ಮುಖಗಳನ್ನು ಪರಿಚಯಿಸಲಾಗಿದೆ. ಬಜೆಟ್ ಅಧ್ಯಯನದ ನೆಲೆಯಲ್ಲಿ ಪ್ರಸ್ತುತ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಬಜೆಟ್ ಅಧ್ಯಯನವು ಅರ್ಥ ಶಾಸ್ತ್ರದ ವಿದ್ಯಾರ್ಥಿಗಳಿಗೆ ಅಥವಾ ತೆರಿಗೆ ಸಲಹೆಗಾರರಿಗೆ, ಅಥವಾ ಶೇರು-ಸ್ಟಾಕುಗಳಲ್ಲಿ ವ್ಯವಹಾರ ನಡೆಸುವವರಿಗೆ ಅಥವಾ ಕಾರ್ಪೋರೇಟುಗಳಿಗೆ ಮಾತ್ರ ಸಂಬಂಧಿಸಿದ ವಿಷಯವಷ್ಟೇ ಅಲ್ಲ ಇದು ತೆರಿಗೆ ನೀಡುತ್ತಿರುವ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಬಜೆಟ್ಟಿನ ಪರಿಭಾಷೆಯು ಎಲ್ಲರಿಗೂ ಸರಳವಾಗಿ ಅರ್ಥವಾಗುವುದಿಲ್ಲ. ಬಜೆಟ್ಟು ಕೇವಲ ಅಂಕಿಅoಶಗಳ ಒಂದು ದಾಖಲೆಯಲ್ಲ. ಅದು ನಮ್ಮ ಆರ್ಥಿಕತೆಯ ಸ್ಥಿತಿಗತಿಯ ಬಗ್ಗೆ ಬೆಳಕು ಚೆಲ್ಲುವ ಒಂದು ದಸ್ತಾವೇಜಾಗಿದೆ. ಒಟ್ಟು ದೇಶದ ಸಾಲ ಎಷ್ಟಿದೆ, ಸಾಲದ ಮೇಲಿನ ವಾರ್ಷಿಕ ಬಡ್ಡಿ ಎಷ್ಟಿದೆ, ಶಿಕ್ಷಣ-ಆರೋಗ್ಯಗಳಿಗೆ ಬಜೆಟ್ಟಿನಲ್ಲಿ ಎಷ್ಟು ಅನುದಾನ ನೀಡಲಾಗಿದೆ, ತೆರಿಗೆಗಳಲ್ಲಿ ಪ್ರತ್ಯಕ್ಷ ತೆರಿಗೆ-ಅಪ್ರತ್ತಕ್ಷ ತೆರಿಗೆಗಳ ನಡುವಿನ ಭಿನ್ನತೆಯೇನು ಮುಂತಾದ ವಿಷಯಗಳನ್ನು ಬಜೆಟ್ ಸಂಪುಟಗಳ ಅಧ್ಯಯನದಿಂದ ಅರಿತುಕೊಳ್ಳಬಹುದು.