ಗ್ರಾಮೀಣ ಅಂಗಡಿ

ಗ್ರಾಮೀಣ ಜನತೆಯ ಬದುಕಿಗೆ ಆಸರೆಯಾಗಿ, ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ಪಾರಂಪರಿಕವಾದ ದೇಶಿಯ ವಸ್ತುಗಳನ್ನು ತಯಾರಿಸಲು ಹಾಗೂ ಅವುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಕರಕುಶಲ ಕರ್ಮಿಗಳೇ ಕಟ್ಟಿಕೊಂಡಿರುವ “ಗ್ರಾಮೀಣ ಕರಕುಶಲ ಉದ್ಯಮ”ವಿದು. ಬೆಂಗಳೂರಿನ ಜಯನಗರದಲ್ಲಿ ಮೊದಲ ಬಾರಿಗೆ ಗ್ರಾಮೀಣ ಕರಕುಶಲ ಉದ್ಯಮದಿಂದ ಆರಂಭವಾದ ‘ಗ್ರಾಮೀಣ ಅಂಗಡಿ’ಯು ಜನರ ವಿಶ್ವಾಸವನ್ನು ಗಳಿಸುತ್ತಾ ಜನಪ್ರಿಯವಾಯಿತು, ಅದೇ ಜನಪ್ರಿಯತೆಯ ಆಧಾರದ ಮೇಲೆ ಈಗ ಬೆಂಗಳೂರಿನಾದ್ಯAತ ಎಂಟು ‘ಗ್ರಾಮೀಣ ಅಂಗಡಿ’ ಘಟಕಗಳು ರೂಪುಗೊಂಡು ಇಪ್ಪತ್ತು ವರ್ಷಗಳನ್ನು ಪೂರೈಸಿ ಮುಂದೆ ಸಾಗುತ್ತಿದೆ.

ಖಾದಿ- ಕೈಮಗ್ಗ

ಅಚ್ಚ ಖಾದಿ ಸೀರೆಗಳು- ಅಚ್ಚ ಕೈಮಗ್ಗದ ಸೀರೆಗಳು, ಹತ್ತಿ ಮತ್ತು ರೇಷ್ಮೆ ಸೀರೆಗಳು, ಸಾವಯವ ಕೈಮಗ್ಗದ ಖಾದಿ ಸೀರೆಗಳು, ವಸ್ತçದ ಬಿಡಿ ಭಾಗಗಳು, ದುಪಟ್ಟಾ, ಖುರ್ತಾಗಳು, ಜುಬ್ಬಾ, ಖಾದಿ ಶರ್ಟು, ವೆಸ್ಟ್ ಕೋಟ್ ಗಳು, ಕರವಸ್ತçಗಳು, ಪೈಜಾಮಗಳು, ಧೋತಿಗಳು, ಗಂಡು ಮತ್ತು ಹೆಣ್ಣುಮಕ್ಕಳ ಬಟ್ಟೆಗಳು, ಮಕ್ಕಳ ಹಾಗೂ ದೇಶಿಯ ಸಾಂಪ್ರದಾಯಿಕ ಉಡುಪುಗಳು.

ಕರ-ಕುಶಲ ವಸ್ತುಗಳು

ಮರದ ಆಟಿಕೆಗಳು, ಲಾವಂಚದ ವಸ್ತುಗಳು, ಬಿದಿರಿನ ಆಟಿಕೆಗಳು, ಚನ್ನಪಟ್ಟಣ-ಕಿನ್ನಾಳ-ಕೊಂಡಪಲ್ಲಿಯ ಪ್ರಸಿದ್ಧ ಆಟಿಕೆಗಳು, ಮಡಿಕೆ-ಕುಡಿಕೆಗಳು, ಗೋಡೆಗೆ ತೂಗು ಹಾಕುವ ಚಿತ್ರಗಳು, ಹುಲ್ಲಿನ ನೆಲಹಾಸುಗಳು, ಕಲಮ್‌ಕಾರಿ, ಜೂಟ್ ಮತ್ತು ಖಾದಿಯ ನೆಲಹಾಸುಗಳು, ಪರದೆಗಳು, ಲೋಹದಿಂದ ಮತ್ತು ಸೆಣಬಿನಿಂದ ಮಾಡಿದ ದೀಪಗಳು, ಗೆಜ್ಜೆವಸ್ತç, ಮತ್ತು ಬಾಳೆ ನಾರಿನ ಬ್ಯಾಗುಗಳು, ಪರ್ಸ್ ಮತ್ತು ಫೋಲ್ಡರ್‌ಗಳು, ಟೆರಾಕೋಟ್‌ನ ಆಭರಣಗಳು, ಬೋರ್ಡ್ ಆಟೋಪಕರಣಗಳು, ಕಟ್ಟಿಗೆಯಿಂದ ಉಡುಗೊರೆ ವಸ್ತುಗಳು, ತಾಮ್ರದ ಬಾಟಲಿ ಮತ್ತು ಜಗ್ಗುಗಳು, ಟೆರಾಕೋಟ್‌ನಲ್ಲಿ ಮಾಡಿದ ಅಡುಗೆ ಪಾತ್ರೆಗಳು, ದೀಪಾವಳಿಗೆ ಸುಟ್ಟಾವೆ ಮಣ್ಣಿನ ಹಣತೆಗಳು, ದಸರಾ ಸಮಯದಲ್ಲಿ ಸುಟ್ಟಾವೆ ಮಣ್ಣಿನಿಂದ ತಯಾರಾದ ಪಾರಂಪರಿಕ ಹಿನ್ನಲೆಯುಳ್ಳ ಗೊಂಬೆಗಳು, ದೇಶಿಯ ಸಾಂಪ್ರದಾಯಿಕ ಉಡುಗೊರೆ ವಸ್ತುಗಳು.

ಸಾವಯವ ಮತ್ತು ನೈಸರ್ಗಿಕ ಆಹಾರ ಉತ್ಪನ್ನಗಳು

ಕಿರಾಣಿ ಸಾಮಗ್ರಿ, ಕೆಂಪಕ್ಕಿ, ರಾಜಮುಡಿ ಅಕ್ಕಿ, ನುಚ್ಚಕ್ಕಿ ಮತ್ತು ಎಲ್ಲ ರೀತಿಯ ಅಕ್ಕಿ, ರಾಗಿ, ಸಿರಿಧಾನ್ಯಗಳು, ಬೆಲ್ಲ, ತಾಟಿಬೆಲ್ಲ, ಗಾಣದಿಂದ ತಯಾರಿಸಿದ ಅಡುಗೆ ಎಣ್ಣೆ, ಖಾದ್ಯ ತೈಲಗಳು, ಉತ್ತರ ಕರ್ನಾಟಕ-ಮಲೆನಾಡು-ಕರಾವಳಿ ಭಾಗದ ಆಹಾರ ಉತ್ಪನ್ನಗಳು, ಸಿದ್ಧ ಮಾದರಿಯ ಪಾನೀಯಗಳು, ಸಿದ್ಧ ಮಾದರಿಯ ತಿನಿಸುಗಳು, ಸಾಂಪ್ರದಾಯಿಕ ಆಹಾರ ಉತ್ಪನ್ನಗಳು.

ಸಾವಯವ-ನೈಸರ್ಗಿಕ ಹಣ್ಣು ಮತ್ತು ತರಕಾರಿಗಳು

ತಾಜಾ ತರಕಾರಿ ಮತ್ತು ಹಣ್ಣುಗಳು, ಋತುಮಾನಕ್ಕೆ ಅನುಗುಣವಾಗಿ ಸಿಗುವ ಹಣ್ಣು ಮತ್ತು ತರಕಾರಿಗಳು, ಅಣಬೆ, ಮೆಕ್ಕೆಜೋಳ, ಹಸುವಿನ ಹಾಲು, ಮೇಕೆಯ ಹಾಲು ಮತ್ತಿತರೆ ಡೈರಿ ಉತ್ಪನ್ನಗಳು.

ಆಯುರ್ವೇದ ಮೂಲಿಕೆಗಳು

ನೆಲ್ಲಿ, ಹಾಗಲಕಾಯಿ, ಬೇವು, ಒಣ ದ್ರಾಕ್ಷಿ, ನಿಂಬೆ ಹುಲ್ಲು, ಜೀರಿಗೆ, ಸೊಗದೆ ಬೇರು, ಶುಂಠಿ, ನಿಂಬೆ, ತುಳಸಿ, ಲೋಳೆಸರ, ಗೋಧಿ ಹುಲ್ಲು, ಅಮೃತಬಳ್ಳಿ, ಪುದೀನಾ, ಲಾವಂಚ, ಸೀಬೆ, ನೋನಿ ಬಾದಾಮಿ ರಸ, ಬ್ರಾಹ್ಮಿ, ಗುಲಾಬಿ, ಕಶಾಯ ಪುಡಿ, ಸಿಹಿ ಪುದೀನಾ, ಗ್ರೀನ್ ಟೀ, ನೈಸರ್ಗಿಕ ಜೇನು ಮತ್ತಿತರೆ ಆರೋಗ್ಯಕರ ವಸ್ತುಗಳು.

ಸಾವಯವ ಸೌಂದರ್ಯವರ್ಧಕಗಳು

ನೈಸರ್ಗಿಕ ಸಾಬೂನು, ಮಸಾಜು ಎಣ್ಣೆ, ಕಾಡಿಗೆಗಳು, ಕೇಶತೈಲಗಳು, ಫೇಸ್ ಪ್ಯಾಕ್‌ಗಳು, ಶ್ಯಾಂಪೂ, ಬಾಡಿ ಲೋಶನ್‌ಗಳು, ಮುಖಕ್ಕೆ ಹಚ್ಚುವ ಕ್ರೀಮ್‌ಗಳು, ನೈಸರ್ಗಿಕ ಸುಗಂಧತೈಲಗಳು, ಕೊಬ್ಬರಿ ಎಣ್ಣೆ, ಸೆಣಬು, ಎಲ್ಲ ರೀತಿಯ ಸಾರಭೂತ ತೈಲಗಳು, ಕೇಶವರ್ಧಕ ಹಾಗೂ ಆರೋಗ್ಯವರ್ಧಕ ವಸ್ತುಗಳು, ನೈಸರ್ಗಿಕ ಸಾಂಪ್ರದಾಯಿಕ ಸೌಂದರ್ಯವರ್ಧಕಗಳು.

ಇದು ಗ್ರಾಮೀಣ ಉತ್ಪಾದಕರೇ ಕೈಜೋಡಿಸಿ ನಡೆಸುತ್ತಿರುವ ಮಾರಾಟ ಮಳಿಗೆ, ಶುದ್ಧ ಸಾಮಗ್ರಿ-ನೈಜಬೆಲೆೆ ನಮ್ಮ ಧ್ಯೇಯವಾಕ್ಯ. ಮನೆಯಲ್ಲಿ ಗ್ರಾಮೀಣ ಸೊಗಡಿರಲಿ.... ಗ್ರಾಮದಲ್ಲಿ ದೀಪ ಬೆಳಗುತಿರಲಿ....