ಜನ ಪ್ರಕಾಶನ
ಸಾಹಿತ್ಯ ಕ್ಷೇತ್ರದಲ್ಲಿ ವಿನೂತನ ಪ್ರಯತ್ನ ಮಾಡುವ ಆಶಯದೊಂದಿಗೆ ಸಮಾನ ಮನಸ್ಕ ಸ್ನೇಹಿತರು ಒಂದು ತಂಡವಾಗಿ ಪ್ರಾರಂಭಿಸಿದ ಪ್ರಕಾಶನವೇ ಜನ ಪ್ರಕಾಶನ. ಮುಖ್ಯವಾಗಿ ಪ್ರಗತಿಪರ ವಿಚಾರಧಾರೆಯ ಪುಸ್ತಕಗಳು ಎಲ್ಲ ವರ್ಗದ ಜನರಿಗೂ ಕೈಗೆಟಕುವ ಬೆಲೆಯಲ್ಲಿ ಸಿಗುವಂತೆ ಪುಸ್ತಕಗಳನ್ನು ಒದಗಿಸಬೇಕು ಎಂಬುದು ಜನ ಪ್ರಕಾಶನದ ಪ್ರಮುಖ ಉದ್ದೇಶವಾಗಿದೆ. ಜನ ಸಮುದಾಯದ ಸಂಸ್ಕೃತಿ, ಬದುಕು-ಬವಣೆ ಹಾಗೂ ವೈಚಾರಿಕತೆಯ ವಿಸ್ತೃತಿ ಮತ್ತು ವೈಜ್ಞಾನಿಕ ಮನೋಭಾವದ ಜೊತೆಗೆ ಸಾಮಾಜಿಕ ನ್ಯಾಯದ ಸಮಗ್ರ ತಿಳುವಳಿಕೆಯನ್ನು ಜನ ಸಾಮಾನ್ಯರಿಗೆ ಅಕ್ಷರದ ಮೂಲಕ ಬಿತ್ತರಿಸಬೇಕು ಎನ್ನುವ ಧ್ಯೇಯೋದ್ದೇಶದ ಪ್ರತಿಫಲವಾಗಿ ಹಲವಾರು ಪುಸ್ತಕಗಳು ಜನ ಪ್ರಕಾಶನದ ಮೂಲಕ ಮೂಡಿ ಬರುತ್ತಿವೆ.
ಒಟ್ಟಾರೆಯಾಗಿ ವಿದ್ಯಾರ್ಥಿಗಳು -ಯುವಜನರು, ಮಹಿಳೆಯರು, ರೈತ-ಕಾರ್ಮಿಕರು ಹಾಗೂ ಸಮಸ್ತ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಂತಹ ನಿಟ್ಟಿನಲ್ಲಿ, ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯಿಂದ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಸಂಶೋಧಿತ, ಸಂಪಾದಿತ ಮತ್ತು ಸಾಹಿತ್ಯಕ ಕೃತಿಗಳನ್ನು ಜನ ಪ್ರಕಾಶನ ಪ್ರಕಟಿಸುತ್ತಿದೆ. ನಮ್ಮ ಹೆಸರೇ ಸೂಚಿಸುವಂತೆ ಜನ ಸಮುದಾಯವನ್ನು ಜಾಗೃತಗೊಳಿಸುವ ಜನ ಪರ ಪಂಥದ ಪ್ರಕಾಶನವು ನಮ್ಮದಾಗಿದೆ.