‘ಎಲ್ಲರ ಅಂಬೇಡ್ಕರ್’

100.00

ಡಾ. ಎಚ್.ಟಿ ಪೋತೆ

Category:

Description

ಸುಬೇದಾರ್ ರಾಮ್ ಜಿ ಸಕ್ಪಾಲ್ ಮತ್ತು ಶ್ರೀಮತಿ ಭೀಮಬಾಯಿ ಅವರ ೧೪ನೇ ಮಗನಾಗಿ ಜನಿಸಿದ ‘ಭೀಮ’. ಬಾಲಕ ಭೀಮ ಪ್ರಾಥಮಿಕ ಶಾಲೆ ಸೇರಿದ್ದ ಶಾಲೆಯಲ್ಲಿ ಶಿಕ್ಷಕರು ಮಕ್ಕಳೆಲ್ಲರೂ ಭೀಮನ ಮುಟ್ಟಿಸಿಕೊಳ್ಳುವುದಿರಲಿ, ಮಾತೂ ಕೂಡ ಆಡುತ್ತಿರಲಿಲ್ಲ. ಹಾಜರಾತಿ ಹಾಕುವಾಗ ಬಿಟ್ಟರೆ ಬೇರೆ ಸಂದರ್ಭದಲ್ಲಿ ಶಿಕ್ಷಕರು ಭೀಮನ ಜೊತೆ ಮಾತನಾಡಿದರೆ ಮೈಲಿಗೆ ಆಗುತ್ತದೆಂಬ0ತೆ ವರ್ತಿಸುತ್ತಿದ್ದರು. ಇಂಥವರ ಮಧ್ಯೆ ಅಂಬೇಡ್ಕರ್ ಎಂಬ ಹೆಸರಿನ ಮಾನವೀಯತೆಯುಳ್ಳ ಶಿಕ್ಷಕರೊಬ್ಬರು ಭೀಮನ ಓದು ಮತ್ತು ಆಸಕ್ತಿಯನ್ನು ಗಮನಿಸಿ ‘ಅಂಬೇಡ್ಕರ್’ ಎಂದು ಹೆಸರಿಟ್ಟರು. ಜೊತೆಗೆ ಶಾಲೆಯಲ್ಲೂ ದಾಖಲಿಸಿ ಭೀಮನ ತಂದೆಗೂ ತಿಳಿಸಿದರು. ಹೀಗೆ ಶಾಲಾ ಶಿಕ್ಷಣ ಆರಂಭಿಸಿದ ಪುಟ್ಟ ಭೀಮನಿಗೆ ಬಾಯಾರಿಕೆಯಾದಾಗ ಶಾಲೆಯ ಹೊರಗೆ ಕರೆದು ಮೇಲಿನಿಂದ ನೀರನ್ನು ಸುರಿಯುತ್ತಿದ್ದರು. ಶಾಲೆಯ ಕಪ್ಪು ಹಲಗೆ ಹತ್ತಿರ ಹೋಗುವಂತಿರಲಿಲ್ಲ. ಕ್ಷೌರದ ಅಂಗಡಿಯಲ್ಲಿ ತಲೆ ಕೂದಲು ಕತ್ತರಿಸುವಂತಿರಲಿಲ್ಲ.
ಈಗಿನ ಮಹಾರಾಷ್ಟ್ರದ ಬರೋಡಾದ ರಾಜ ಸಯ್ಯೋಜಿ ರಾವ್ ಗಾಯಕವಾಡ್‌ರವರು ನೀಡಿದ್ದ ವೇತನದಿಂದ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ಭಾರತಕ್ಕೆ ಬಂದಿದ್ದ ಅಂಬೇಡ್ಕರ್ ರವರು ಹೋಟೆಲಿನಲ್ಲಿ ಉಳಿದುಕೊಂಡಿರುತ್ತಾರೆ. ಈ ವಿಚಾರ ಹಿಂದೂ ವಾಸಿಗಳಿಗೆ ಗೊತ್ತಾಗುತ್ತಿದ್ದಂತೆ ಹಿಂದೂ ಯುವಕರ ಗುಂಪು ಬಾಬಾಸಾಹೇಬರ ರೂಮಿನೊಳಗೆ ಪುಸ್ತಕಗಳು ತುಂಬಿದ ಟ್ರಂಕ್‌ನ ಜೊತೆಗೆ ಅಂಬೇಡ್ಕರ್‌ರವರನ್ನು ರೂಮ್‌ನಿಂದ ಹಿಡಿದು ಹೊರದಬ್ಬುತ್ತಾರೆ. ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ೨೬ ವರ್ಷ ವಯಸ್ಸು.
ಇಂತಹ ಅವಮಾನಗಳ ಆಚರಣೆಯ ಕ್ರೂರತೆಯನ್ನು ಅಂಬೇಡ್ಕರ್‌ರವರು ಅನುಭವಿಸಿದ್ದರು. ಇವು ಅಂಬೇಡ್ಕರ್‌ರವರು ಬಾಲ್ಯ ಮತ್ತು ಯುವಕರಾಗಿದ್ದ ಸಂದರ್ಭದಲ್ಲಿನ ಒಂದೆರಡು ಉದಾಹರಣೆ ಅಷ್ಟೇ. ಹೀಗೆ ಬಾಬಾಸಾಹೇಬರು ಹುಟ್ಟಿನಿಂದ ಪರಿನಿಬ್ಬಾಣದವರೆಗೂ ಅನುಭವಿಸಿದ ಯಾತನಮಯ ಜೀವನವನ್ನು ನಡೆಸಿದ್ದಾರೆ.
ಹೀಗೆ ಜಾತಿವ್ಯವಸ್ಥೆ ಅಸ್ಪೃಷ್ಯತೆಯ ಆಚರಣೆಯಲ್ಲಿ ನೊಂದು-ಬೆ0ದು, ಶೋಷಿತರ ಸ್ವಾಭಿಮಾನದ ಧ್ವನಿಯಾದ ಅಂಬೇಡ್ಕರ್‌ರವರ ಜೀವನ ಗಾಥೆಯನ್ನು ಪ್ರೊ. ಎಚ್.ಟಿ ಪೋತೆಯವರ “ಎ¯್ಲರ ಅಂಬೇಡ್ಕರ್” ಓದುವ ಮುಖಾಂತರವೇ ಅರಿಯಬೇಕು. ಇಂತಹ ಮಹನೀಯರ ಬಗ್ಗೆ ಜನ ಸಾಮಾನ್ಯರ ಮತ್ತು ವಿದ್ಯಾರ್ಥಿ ಯುವಜನರ ತಿಳುವಳಿಕೆಗಾಗಿಯೇ ಈ ಕೃತಿಯನ್ನು ಡಾ. ಎಚ್.ಟಿ ಪೋತೆ ರಚಿಸಿಕೊಟ್ಟಿದ್ದಾರೆ.