ಮಾನಸೋಲ್ಲಾಸ
ಕಲಿಕೆ ಮತ್ತು ನೆನಪು:
ಮಕ್ಕಳ ಉತ್ತಮ ಕಲಿಕೆ ಮತ್ತು ನೆನಪಿಗೆ ಎಂಟು ಸೂತ್ರಗಳು:
- ಅಧ್ಯಯನ ಮಾಡಲು ನಿರ್ದಿಷ್ಟ ಸಮಯ ಮತ್ತು ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಆ ಸಮಯ ಮತ್ತು ಸ್ಥಳದಲ್ಲಿ ಯಾವುದೇ ಆಕರ್ಷಣೆ ಮತ್ತು ವಿಕರ್ಷಣೆ ಇರಬಾರದು. ಮಗು ಪ್ರಶಾಂತವಾಗಿರಬೇಕು, ನಿತ್ಯ ಅದೇ ಜಾಗ ಮತ್ತು ಸಮಯದಲ್ಲಿ ಮಗು ಅಭ್ಯಾಸಕ್ಕೆ ಕೂರಬೇಕು.
- ಏಕಾಗ್ರತೆ ಮತ್ತು ಶೃದ್ಧೆಯಿಂದ ೩೦ ರಿಂದ ೪೫ ನಿಮಿಷಗಳ ಕಾಲ ಓದಿ, ಓದಿದನ್ನು ಅರ್ಥಮಾಡಿಕೊಳ್ಳಲಿ, ಅರ್ಥವಾಯಿತೇ ಎಂದು ಚೆಕ್ ಮಾಡಿ.
- ಸಾರಾಂಶ ಮತ್ತು ಮುಖ್ಯಾಂಶಗಳನ್ನು ನೆನಪಿನಿಂದ ಬರೆಯಲು ಹೇಳಿ.
- ಎರಡು ನಿಮಿಷ ವಿಶ್ರಮಿಸಲಿ, ಎದ್ದು ಓಡಾಡುವುದು ಅಥವಾ ಕಣ್ಣುಮುಚ್ಚಿ ಧ್ಯಾನ ಮಾಡುವುದು ಮಾಡಲಿ, ದೀರ್ಘ ಉಸಿರಾಟವನ್ನು ರೂಢಿಸಿ.
- ವಿರಾಮದ ನಂತರ ವಿಷಯ ಬದಲಾಗಲಿ, ದೀರ್ಘಕಾಲ ಒಂದೇ ವಿಷಯದ ಅಧ್ಯಯನ ಬೇಡ.
- ಸ್ಮರಣೆ: ಓದಿದ್ದನ್ನ ಮತ್ತೆ ಮತ್ತೆ ಸ್ಮರಿಸಲಿ. ನಿನ್ನೆ ಓದಿದ್ದು, ಹೋದವಾರ ಓದಿದ್ದು, ತಿಂಗಳ ಹಿಂದೆ ಓದಿದ್ದು ನೆನಪಿಸಿಕೊಳ್ಳಲಿ. ಮರೆತಿದ್ದನ್ನು ಮತ್ತೆ ಓದಲಿ
- ಪ್ರಶ್ನೆಗಳಿಗೆ ಕಾಲ ಮಿತಿಯಲ್ಲಿ ಉತ್ತರ ಬರೆಯುವ ಅಭ್ಯಾಸ ಮಾಡಿಕೊಳ್ಳಲಿ, ಆದಷ್ಟು ಉತ್ತರವನ್ನು ಉತ್ತಮಗೊಳಿಸುವ ಕುರಿತು ಅಧ್ಯಾಪಕರನ್ನು ಮಗು ಕೇಳುವ ಗುಣ ರೂಢಿಸಿಕೊಳ್ಳಲಿ.
- ವೇಳೆಗೆ ಸರಿಯಾಗಿ ಆಹಾರ ಕೊಡಿ. ಮಗು ಆರೇಳು ಗಂಟೆ ನಿದ್ರಿಸಬೇಕು, ನಿರ್ದಿಷ್ಟ ವೇಳೆಯಲ್ಲಿ ಮನರಂಜನಾ ಚಟುವಟಿಕೆಯಲ್ಲಿ ಭಾಗವಹಿಸಲಿ. ಯಾವುದೇ ರೀತಿಯ ಒತ್ತಡ ಹೇರದೆ ಮಗುವಿಗೆ ಸಮಾಧಾನವಾಗಿ ಅಧ್ಯಯನ ಮಾಡಲು ಅವಕಾಶ ನೀಡಬೇಕು.
–ಮಕ್ಕಳ ಭವಿಷ್ಯ ಮಾರ್ಗಸೂಚಿ